ಗಮನಿಸಿ: ಚರ್ಚ್ ಸೇವೆಯ ಸಮಯದಲ್ಲಿ ನಿಮ್ಮ ಮೊಬೈಲ್‌ನಲ್ಲಿ ಏರ್‌ಪ್ಲೇನ್ ಮೋಡ್ ಅನ್ನು ಆನ್ ಮಾಡಿ ]

Adoration | Song #1

ಜಯ ಕೊಡುವ ದೇವರಿಗೆ ಕೋಟಿ ಕೋಟಿ ಸ್ತೋತ್ರ
ಜೀವ ನೀಡುವ ಯೇಸು ರಾಜನಿಗೆ ಜೀವಿತವೆಲ್ಲ ಸ್ತೋತ್ರ

ಹಲ್ಲೆಲೂಯಾ ಹಲ್ಲೆಲೂಯಾ ಹಾಡುವೆ
ಆನಂದ ಧ್ವನಿಯಿಂದ ಹೊಗಳುವೇ

1.ನೀತಿಯ ಹಸ್ತದೀ ಸಹಿಸಿ ನಡೆಸುವ
ಕರ್ತನೆ ನನ್ನ ಬಲವೂ ಹೆದರೇನೂ ಎಂದೆಂದಿಗೂ

2.ಅದ್ಭುತ ಕರ್ತನೆ ಸೃಷ್ಟಿಗೆ ನಾಯಕನೆ
ಯುದ್ಧದಿ ಶೂರನೇ ಜೀವಿಸುವ ರಕ್ಷಕನೆ

3.ನಂಬಿಗಸ್ತನು ನನ್ನನ್ನು ಕಾಯುವನು
ಪರಿಶುದ್ಧ ಆತ್ಮನಿಂದ ಅಭಿಷೇಕ ಮಾಡ್ವನು


Worship | Song#2 

ಕರುಣಾಳು ಯೇಸುವೇ 
ನಿನ್ನನೇ ಕೊಂಡಾಡುವೆನು 	
ನಿನ್ನಯ್ಯ ಆಶ್ರಯದಲ್ಲಿ 
ಹಾಡಿ ಹರಸಿ ಸ್ತುತಿಸುವೆನು   

1. ನಿನ್ನ ಕೃಪೆ ನನ್ನ ಮೇಲೆ 
ಅಪಾರವಾಗಿದೆ. 
ಅತಿಶಯ ವಾತ್ಸಲ್ಯದಿಂದ, 
ನನ್ನ ಪೋಷಿಸಿ ಕಾಪಾಡಿತಿ. 
ನೀತಿ, ಕೃಪೆ ಕಿರೀಟದಿಂದ, 
ನನ್ನ ಶಿಂಗಾರಿಸಿದಿ.  

2. ಕಣ್ಣಿರುಯೆಲ್ಲ ಒರಿಸಿದಿ, ನಿನ್ನ ಪ್ರೀತಿ ಕರಗಳಿಂದ. 
ಕರುಣಿಸಿ ಕಾಪಾಡಿದಿ, 
ಎಲ್ಲ ಭೀತಿ ಬಯ್ಗಳಿಂದ. 
ನಿನ್ನ ಅಮೂಲ್ಯ  ಪ್ರಸ್ನೆತೆಯು, 
ಚೈತನ್ಯ ಪಡಿಸುತ್ತದೆ.


Offering | Song#3

ನನ್ನ ನಡೆಸುವ ಯೇಸುರಾಜ ನಿಮಗೆ ಸ್ತೋತ್ರ
ಅಯ್ಯ
ನನ್ನಲ್ಲಿರುವ ನನ್ನ ಇನಿಯ ನಿಮಗೆ ಸ್ತೊತ್ರ
ಅಯ್ಯ

1.ದಾರಿ ತೋರಿ ಬೆಳಕು ತಂದೆ ನಿಮಗೆ
ಸ್ತೊತ್ರ ಅಯ್ಯ
ನಾಶದಿಂದ ತಪ್ಪಿಸಿರುವೆ ನಿಮಗೆ
ಸ್ತೋತ್ರ ಅಯ್ಯ

2.ಹುಡುಕಿ ಬಂದೆ ಜೀವ ತಂದೆ ನಿಮಗೆ
ಸ್ತೋತ್ರ ಅಯ್ಯ
ಓಡಿ ದುಡಿಯಲು ಬಲವ ತಂದೆ ನಿಮಗೆ
ಸ್ತೋತ್ರ ಅಯ್ಯ

3.ಪಾಪ ರಹಿತ ಬಾಳು ತಂದೆ ನಿಮಗೆ ಸ್ತೋತ್ರ
ಅಯ್ಯ
ಬಾಳ ಬೆಳಗಿ ಭವಿಷ್ಯ ತಂದೆ ನಿಮಗೆ
ಸ್ತೋತ್ರ ಅಯ್ಯ
Back To Top