ಯೇಸು  ಕ್ರಿಸ್ತನ  ದಿವ್ಯ  ಪ್ರೀತಿಯ  ಧ್ಯಾನಮಾಡುವ  ಮಿತ್ರರೇ 
  ದಾಸರೂಪವ  ಧರಿಸಿ  ಪ್ರಾಣವ  ಯಜ್ಞಮಾಡಿದ  ಮಿತ್ರರೇ 

1 ಯೇಸು  ಕ್ರಿಸ್ತನ  ಮೇಜ  ಹತ್ರಕೆ  ಬಂದು  ಕೂಡುವ  ಮಿತ್ರರೇ 
ಗಾಸಿ  ತಪ್ಪಿಸ  ಸ್ವಂತ  ರಕ್ತವ  ಚೆಲ್ಲಿಬಿಟ್ಟನು   ಮಿತ್ರರೇ 

2 ಗೆತ್ತುಸೇಮನೆಯಲ್ಲಿ  ವ್ಯಾಕುಲವೆಷ್ಟು  ಪಟ್ಟನು  ನೋಡಿರಿ 
ಮತ್ತೆ  ಚೆಲ್ಲಿದ  ರಕ್ತಬೆವರಿನ  ಬಿಂದುವೆಲ್ಲವ  ನೋಡಿರಿ 

3 ತೂಗಿ  ಶಿಲುಬೆಯ  ಮೇಲೆ  ವೇದನೆಪಟ್ಟ  ಸ್ವಾಮಿಯು   ಆತನೇ 
ಕೂಗಿ  ಪ್ರಾಣವ  ಬಿಟ್ಟು  ಬಾಗಿದ  ಯಜ್ಞಪಶುವು  ಆತನೇ 

4 ಈಗ  ನಮ್ಮನು  ನಾವು  ಶೋಧಿಸಿಕೊಂಡು  ಇಲ್ಲಿಗೆ  ಸೇರುವ 
ಆಗ  ಕರ್ತನು  ನಮ್ಮ  ಆತ್ಮಕೆ  ತುಂಬ  ಭಾಗ್ಯವ  ನೀಡುವ
Weekly Scripture now available: https://www.mcsmission.org/downloads/
Now available:
https://www.mcsmission.org/downloads/
powered by bulletin